
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಮೊಮ್ಮಗ ಕ್ರಿಶ್ಚಿಯನ್ ಧರ್ಮ ತೊರೆದು ‘ಇಸ್ಲಾಮ್‌ಗೆ ಮತಾಂತರವಾಗಬೇಕೆಂದು’ ಹಜ್ ಯಾತ್ರೆ ಸಂದರ್ಭ ಒಬಾಮ ಅಜ್ಜಿ ಪ್ರಾರ್ಥಿಸಿಕೊಂಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಬರಾಕ್ ಒಬಾಮ ಹುಸೈನ್ ಯಾವಾಗಲೂ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವನು ಎಂಬುದಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲೂ ಒಬಾಮ ಮುಸ್ಲಿಮ್ ಎಂಬುದಾಗಿಯೇ ಬಹುತೇಕರು ಅಭಿಪ್ರಾಯವ್ಯಕ್ತಪಡಿಸಿದ್ದರು. ತದನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಒಬಾಮ, ತಾನು ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯೇ ವಿನಾಃ ಮುಸ್ಲಿಮ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಇದೀಗ ಒಬಾಮ ಅಜ್ಜಿ 88ರ ಹರೆಯದ ಸಾರಾ ಓಮರ್ ಪ್ರಸಕ್ತ ಸಾಲಿನಲ್ಲಿಯೂ ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 2009ರಲ್ಲಿಯೂ ಹಜ್ ಯಾತ್ರೆ ಪೂರೈಸಿದ್ದರು. ಆ ನಿಟ್ಟಿನಲ್ಲಿ ಬರಾಕ್ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಬೇಕೆಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ಸೌದಿ ಅರೇಬಿಯಾದ ಅಲ್ ಖ್ವಾಟಾನ್ ಸೌದಿ ದೈನಿಕಕ್ಕೆ ತಿಳಿಸಿದ್ದಾರೆ.
ನನ್ನ ಮೊಮ್ಮಗ ಅಮೆರಿಕದ ಅಧ್ಯಕ್ಷ ಒಬಾಮ ಮತ್ತೆ ಇಸ್ಲಾಮ್ ಧರ್ಮಕ್ಕೆ ಮತಾಂತರ ಆಗಬೇಕು ಎಂಬುದು ನನ್ನ ಇಚ್ಚೆಯಾಗಿದೆ ಎಂದು ಒಮರ್ ತಿಳಿಸಿರುವುದಾಗಿ ವರದಿ ಹೇಳಿದೆ. ಒಬಾಮ ಅಜ್ಜಿ ತನ್ನ ಮಗ ಹುಸೈನ್ ಒಬಾಮ (ಒಬಾಮ ಚಿಕ್ಕಪ್ಪ) ಹಾಗೂ ನಾಲ್ಕು ಮೊಮ್ಮಕ್ಕಳ ಜತೆ ಹಜ್ ಯಾತ್ರೆಯನ್ನು ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾನು ಈ ಸಂದರ್ಭದಲ್ಲಿ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಮಾತ್ರ ಮಾತನಾಡುತ್ತೇನೆ ವಿನಃ, ಒಬಾಮನ ರಾಜಕೀಯ ವಿಷಯವಾಗಿ ಏನನ್ನೂ ಚರ್ಚಿಸಲಾರೆ ಎಂದು ಈ ಸಂದರ್ಭದಲ್ಲಿ ಒಬಾಮ ಅಜ್ಜಿ ತಿಳಿಸಿದ್ದಾರೆ. ಹಜ್ ಯಾತ್ರೆಗೆ ಆಗಮಿಸಿದ ತಮಗೆ ಸೌದಿ ಸರಕಾರ ಉತ್ತಮ ರೀತಿಯಲ್ಲಿ ವಸತಿ ಸೌಕರ್ಯ ಏರ್ಪಡಿಸಿ ಅತಿಥಿ ಸತ್ಕಾರ್ಯ ಮಾಡಿದ್ದಕ್ಕೆ ರಾಜ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
No comments:
Post a Comment