.
ಮುಂಬೈ ನಲ್ಲಿ ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ನಿರ್ಮಿಸುತ್ತಿರುವ ಎರಡು ಶತಕೋಟಿ ಡಾಲರ್ ವೆಚ್ಚದ ಮನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಭವ್ಯ ಮನೆ ನಿರ್ಮಿಸಲು ಅಂಬಾನಿ ಅವರು ವಕ್ಫ್ ಮಂಡಳಿಯ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಆರೋಪ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ವಿವಾದದ ಸತ್ಯಾಸತ್ಯತೆ ತಿಳಿಯಲು Central Vigilance Commission ತನಿಖೆಗೆ ಆರಂಭಿಸಲಾಗಿದ್ದು, ಅಂಬಾನಿ ಅವರ ಮನೆ ನಿರ್ಮಿಸಲು ಸುಮಾರು 4,532 ಚದರಡಿ ವಕ್ಫ್ ಮಂಡಳಿಯ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಅಂಬಾನಿ ಕಂಪನಿಯ ವಕ್ತಾರರು ಮಾತ್ರ, ವಕ್ಫ್ ಮಂಡಳಿಯಿಂದ ಕಾನೂನು ಪ್ರಕಾರ ಜಾಗವನ್ನು ಖರೀದಿಸಲಾಗಿದ್ದು, ಮಾರುಕಟ್ಟೆ ಬೆಲೆಯನ್ನು ಸಂಬಂಧಿಸಿದವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ
No comments:
Post a Comment