ಬಾಬರಿ ಮಸೀದಿ ನಿವೇಶನ ಒಡೆತನ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲು ಅಕ್ಟೋಬ್ 30 ಮತ್ತು 31ರಂದು ಬೆಂಗಳೂರಿನಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ಸಂಘಟನೆಯು ಕಾನೂನು ಉಪದೇಶಕ ಸೆಲ್ ಒಂದನ್ನು ರಚಿಸಲಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪು ಅನ್ಯಾಯ, ದ್ವಿಮುಖ ಹಾಗೂ ಕಾನೂನು ಬಾಹಿರವಾಗಿದ್ದು, ಹಿಂದುತ್ವ ಸಂಘಟನೆಗಳ ದಾಳಿ ಮತ್ತು ಕೋಮು ಅಜೆಂಡಾವನ್ನ್ನು ಅದು ನ್ಯಾಯ ಸಮ್ಮತಗೊಳಿಸಿದೆ ಎಂದು ಸಭೆ ಅಭಿಪ್ರಾಯಿಸಿದೆ. ಬಾಬರಿ ಮಸೀದಿ ಧ್ವಂಸವು ರಾಷ್ಟ್ರದ ಜಾತ್ಯತೀತ ಚೌಕಟ್ಟಿನ ಮೇಲಿನ ದಾಳಿಯಾಗಿದ್ದು, ಇಡೀ ದೇಶವು ಬಾಬರಿ ಮಸೀದಿಗೆ ನ್ಯಾಯದ ನಿರಿಕ್ಷೆಯಲ್ಲಿತ್ತು. ಆದರೆ ನ್ಯಾಯವು ಇನ್ನೂ ನಿರೀಕ್ಷೆಯಾಗಿಯೇ ಉಳಿದಿದೆ.
ಬಾಬರಿ ಮಸೀದಿ ವಿಷಯಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಪಾಪ್ಯುಲರ್ ಫ್ರಂಟ್ ಮುಂಚೂಣಿಯಲ್ಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಜನರಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುವುದಕ್ಕಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಡಿಸೆಂಬ್ 2010ರಿಂದ ಜನವರಿ 2011ರ ತನಕ ಬೃಹತ್ ಅಭಿಯಾನವೊಂದನ್ನು ನಡೆಸಲು ನಿರ್ಧರಿಸಿದೆ. ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಸಮುದಾಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಹಲವು ಯೋಜನೆಗಳನ್ನು ಹಾಕಿದೆ. ಯೋಜನೆಯು ವಿಶೇಷ ರೂಪುರೇಖೆ ಹಾಗೂ ಕಾರ್ಯಕ್ರಮಗಳನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಅಧ್ಯಯನಗಳು ನಡೆಯಲಿದ್ದು, ಆ ಪ್ರದೇಶಗಳಲ್ಲಿ ವಿಶೇಷ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು.
ನವೆಂಬರ್ 21ರಿಂದ 28ರ ತನಕ “ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಾರ”ವನ್ನು ಆಯೋಜಿಸಲು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ನಿರ್ಧರಿಸಿದೆ. ಆರೋಗ್ಯ, ಪಾಲನೆ ಮತ್ತು ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಅಭಿಯಾನವು ಹೊಂದಿದೆ. ಅಭಿಯಾನದ ಅಂಗವಾಗಿ ಕ್ರೀಡೆ, ಪಂದ್ಯಗಳು, ಯೋಗ ತರಗತಿಗಳು, ದೈಹಿಕ ಕ್ಷಮತೆ ಶಿಬಿರ, ಸ್ವಚ್ಛತಾ ಆಂದೋಲನಗಳು,ಆರೋಗ್ಯ ಜಾಗೃತಿ ಕೈಪಿಡಿಗಳು ಮತ್ತು ಕರ ಪತ್ರಗಳ ಹಂಚಿಕೆ ನಡೆಯಲಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಎಂ.ಅಬ್ದುಲ್ ರಹ್ಮಾನ್ ಸಭೆಯಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ .ಎಂ.ಶರೀಫ್, ಡಾ.ಮಹ್ಬೂಬ್ ಶರೀಫ್, ಮುಹಮ್ಮದ್ ಇಲ್ಯಾಸ್, ವಿ.ಪಿ.ನಸ್ರುದ್ದೀನ್, ಮುಹಮ್ಮದ್ ಅಲಿ ಜಿನ್ನಾ, ಅಫ್ಸರ್ ಪಾಶ, ಉಸ್ಮಾನ್ ಬೇಗ್, ರಿಯಾದ್ ಪಾಶ್ ಹಾಗು ಇತರರು ಸಭೆಯಲ್ಲಿ ಭಾಗವಹಿಸಿದ್ದರು
No comments:
Post a Comment