ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಮಕುಂಜ ಕುಂಡಾಜೆ ಎಂಬಲ್ಲಿ ಮೂರುವರೆ ವರ್ಷದ ಪೋರನಿಗೆ ರಾತ್ರೋರಾತ್ರಿ ವಿಸ್ಮಯ ರೀತಿಯಲ್ಲಿ ಸುನ್ನತ್ (ಮುಂಜಿ) ನಡೆದ ಅಪರೂಪದ ಘಟನೆಯೊಂದು ಸಂಭವಿಸಿದ್ದು, ಇದು ಸ್ಥಳೀಯವಾಗಿ ಭಾರೀ ಕುತೂಹಲವನ್ನು ಉಂಟು ಮಾಡಿದೆ.
ರಾಮಕುಂಜದ ಕುಂಡಾಜೆ ನಿವಾಸಿ ಅಬ್ದುಲ್ ರಝಾಕ್-ಸಫಿಯಾ ದಂಪತಿಗಳ ಮೂರುವರೆ ವರ್ಷದ ಮಹಮ್ಮದ್ ಸಾಹಿಲ್ ಎಂಬ ಪೋರನಿಗೆ ರಾತ್ರಿ ಸುಮಾರು ಒಂದು ಗಂಟೆಗೆ ಮೂತ್ರ ಬಂದಾಗ ಅಮ್ಮನನ್ನು ಕೂಗಿದ್ದು ಪೋರನನ್ನು ಮೂತ್ರ ಮಾಡಿಸಿ ಮನೆಯೊಳಗೆ ತರುವಷ್ಟರಲ್ಲಿ ರಕ್ತ ಕಂಡು ಬಂತು ಎಂದು ಪೋರನ ತಾಯಿ ಹೇಳುತ್ತಾರೆ. ಪರಿಶೀಲಿಸಿದಾಗ ಇದು ಮುಸ್ಲಿಂ ಸಂಪ್ರದಾಯದ ಪ್ರಕಾರ ಮಾಡಲಾಗುವ ಮುಂಜಿ (ಸುನ್ನತ್) ನಡೆದದ್ದು ಕಂಡು ಬಂತು ಎನ್ನುತ್ತಾರೆ.
ಪೋರನ ತಂದೆ ಬಾಳೆಗೊನೆ ವ್ಯಾಪಾರ ಮಾಡುತ್ತಿದ್ದು ಎಂದಿನಂತೆ ವ್ಯಾಪಾರಕ್ಕೆಂದು ಮಂಗಳೂರಿಗೆ ಹೋಗಿದ್ದು ಘಟನೆ ವೇಳೆ ತಂದೆ ಮನೆಯಲ್ಲಿರಲಿಲ್ಲ.
ಇದೀಗ ಈ ಘಟನೆ ಭಾರೀ ಕುತೂಹಲವನ್ನುಂಟು ಮಾಡಿದ್ದು, ಈತನನ್ನು ನೋಡಲು ಜನರು ಮನೆ ಕಡೆಗೆ ಬರುತ್ತಿರುವುದು ಕಂಡು ಬಂದಿದೆ.
ಈ ಪೋರನ ತಂದೆ ತಾಯಿ ಅವುಲಿಯಾಗಳ ಭಕ್ತರೆಂದು ಹೇಳ ಲಾಗುತ್ತಿದೆ. ಇದೇ ಕಾರಣದಿಂದ ಕಷ್ಟ ಪರಿಹಾರದ ಸೂಚನೆಯಾಗಿರಬ ಹುದೇ? ಎಂಬುದು ಕೆಲವರ ಪ್ರಶ್ನೆ ಯಾಗಿದೆ. ಈ ಹಿಂದೆ ಕೂಡ ಕೆಲವು ಕಡೆ ಇದೇ ರೀತಿ ಸುನ್ನತ್ ಆಗಿರುವ ಘಟನೆಗಳು ನಡೆದಿದ್ದವು ಎನ್ನಲಾಗಿದೆ. ಇದರಲ್ಲಿ ಕೆಲವು ಘಟನೆಗಳು ಬೆಳಕಿಗೆ ಬಂದಿದ್ದರೆ ಮತ್ತೆ ಕೆಲವು ಸುದ್ದಿಯಾ ಗದೆ ಉಳಿದುಕೊಂಡಿದ್ದವು. ಈ ಹುಡುಗನನ್ನು ನೋಡಲು ಮನೆ ಮುಂದೆ ಪರವೂರಿನಿಂದ ಜನರು ಬರುತ್ತಿರುವುದಾಗಿ ತಿಳಿದುಬಂದಿದೆ
No comments:
Post a Comment