Nov 25, 2010

ಬೆಂಗಳೂರು ಬಾಂಬ್ ಸ್ಫೋಟ ಮತ್ತು ಮಅದನಿ ವಿರುದ್ಧ ಷಡ್ಯಂತ್ರ


ಕೊಯಂಬತ್ತೂರು ಬಾಂಬ್ ಸ್ಫೋಟದ ಆರೋಪಿ ಎಂದು ಸುಳ್ಳು ಆರೋಪ ಹೊರಿಸಲ್ಪಟ್ಟು ಕೇರಳ, ತಮಿಳುನಾಡುಗಳು ವಿವಿಧ ಬಂದೀಖಾನೆಗಳಲ್ಲಿ ಅಕ್ರಮವಾಗಿ ಬಂಧಿಯಾಗಿದ್ದ ದಮನಿತ, ಪೀಡಿತ, ಶೋಷಿತ ವರ್ಗಗಳ ಆಶಾಕಿರಣ ಐ.ಸಿ.ಯಸ್. ಅಬ್ದುಲ್ಲ ನಾಸಿರ್ ಮಅದನಿಯವರ ಬಗ್ಗೆ ಜಯಕಿರಣದಲ್ಲಿ ವಿಸ್ತಾರವಾಗಿ ಲೇಖನ ಪ್ರಕಟವಾಗಿತ್ತು. ನಾನು ಹಾಗೂ ಎಸ್.ಎಂ. ಬಶೀರ್ ಮಂಜೇಶ್ವರ ಮಅ ದನಿಯವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಜಯಕಿರಣದಲ್ಲಿ ಲೇಖನ ಬರೆದಿದ್ದೆವು. ಅದುವರೆಗೆ ಮಅದನಿ ಬಗ್ಗೆ ಕರ್ನಾಟಕದ ಜನತೆಗಿದ್ದ ತಪ್ಪು ಭಾವನೆ ಆ ಮೂಲಕ ದೂರವಾಗಿತ್ತು. ಸ್ವತಃ ಮಅದನಿಯವರೇ ತನ್ನ ಬಗ್ಗೆ ನಿಷ್ಪಕ್ಷಪಾತವಾಗಿ ಬರೆದು ಜನರ ತಪ್ಪು ಕಲ್ಪನೆಗಳನ್ನು ದೂರ ಮಾಡಿದ ಜಯಕಿರಣಕ್ಕೆ ಒಂದು ಅಭಿನಂದನಾ ಪತ್ರ ಬರೆದಿದ್ದರು. ಮಅದನಿ ಜಯಕಿರಣಕ್ಕೆ ಬರೆದ ಅಭಿನಂದನಾ ಪತ್ರ ಅಂದು ಜಯಕಿರಣದ ನಿಮ್ಮಿಂದ ವಿಭಾಗದಲ್ಲಿ ಪ್ರಕಟವಾಗಿತ್ತು. ಸಂತೋಷದ ಸಂಗತಿಯೇನೆಂದರೆ ಜಯಕಿರಣದಲ್ಲಿ ಮಅದನಿ ನಿರಪರಾಧಿ ಎಂದು ಸಮಗ್ರ ಲೇಖನ ಪ್ರಕಟವಾದ ಅಲ್ಪಕಾಲದಲ್ಲೇ ತನ್ನ ನಿರಪರಾಧಿತ್ವ ಸಾಬೀತಾಗಿ ಮಅದನಿ ಬಂಧೀಖಾನೆಯಿಂದ ಬಿಡು ಗಡೆಗೊಂಡಿದ್ದರು. ಮಅದನಿ ಬಗ್ಗೆ ಸತ್ಯ ಸುದ್ದಿ ಬರೆದ ಏಕೈಕ ಪತ್ರಿಕೆ ಜಯಕಿರಣ ಎಂದು ಹಲವಾರು ಮಂದಿ ಹೇಳಿರುವುದನ್ನು ನಾನು ಕೇಳಿದ್ದೇನೆ. ಹಲವಾರು ಮಂದಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು. ಒಂದು ಪತ್ರಿಕೆಯಾಗಿ ಜಯಕಿರಣ ಅಂದು ಮಅದನಿ ಬಗ್ಗೆ ಸತ್ಯಸಂಗತಿಯನ್ನು ಕನ್ನಡಿಗರ ಮುಂದೆ ಅನಾವರಣಗೊಳಿಸಿದ್ದರಿಂದ ಜಯಕಿರಣ ಪತ್ರಿಕೆಯ ಸತ್ಯ ನಿಷ್ಠೆ, ಪ್ರಾಮಾಣಿಕತೆ ಸರ್ವರಿಗೂ ಮನವರಿಕೆಯಾಗಿತ್ತು.

ಇದೀಗ ಬೆಂಗಳೂರು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳಾರೋಪ ಹೊರಿಸಿ ಮಅದನಿಯವರನ್ನು ಕೆಲವು ತಿಂಗಳುಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಕರ್ನಾಟಕ ಸರಕಾರ ಬಂಧಿಸಿದೆ. ಬೆಂಗಳೂರು ಸ್ಪೋಟಕ್ಕೆ ಕೊಡಗಿನಲ್ಲಿ ಸಂಚು ರೂಪಿಸಲು ಮಅದನಿ ಸಹಕರಿಸಿ ದ್ದಾರೆಂಬುದು ಈಗ ಹೊರಿಸಲ್ಪಟ್ಟಿರುವ ಆರೋಪ ಎದ್ದು ನಡೆದಾಡಲು ಸಾಧ್ಯವಿಲ್ಲದ ಮಅದನಿ ಇತರರ ನೆರವಿನೊಂದಿಗೆ ಗಾಲಿ ಕುಚಿಯಲ್ಲಿ ಸಂಚರಿ ಸುತ್ತಾರೆ. ಕೊಯಂಬತ್ತೂರು ಸ್ಪೋಟದಲ್ಲಿ ಮಅದನಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಮಅದನಿಯವರನ್ನು ಬಿಡುಗಡೆಗೊಳಿಸಿದ ಬಳಿಕ ಮಅದನಿ ಯವರ ಕಾವಲಿಗೆ ಸದಾ ನಾಲ್ಕು ಮಂದಿ ಪೊಲೀಸರು ಜೊತೆಗಿರುತ್ತಿದ್ದರು. ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿರುವ ಮಅದನಿ ದೂರದ ಕೊಡಗಿಗೆ ಹೋಗಿ ಬೆಂಗಳೂರು ಸ್ಪೋಟದ ಸಂಚು ರೂಪಿಸಿದರು ಎಂದರೆ ಅದನ್ನು ನಂಬುವಷ್ಟು ಅವಿವೇಕಿಗಳೇ ಕೇರಳ-ಕರ್ನಾಟಕದ ಜನತೆ!? ಸುಳ್ಳಾರೊಪ ಹೊರಿಸುವುದಕ್ಕೂ ಒಂದು ಮಿತಿ ಬೇಕು. ಒಬ್ಬ ಜನನಾಯಕನೊಂದಿಗೆ ದ್ವೇಷ ಸಾಧಿಸಲು ಏನೆಲ್ಲಾ ಷಡ್ಯಂತ್ರಗಳನ್ನು ಹೂಡಿದರೆ ಅದು ನಾಗರಿಕ ಜಗತ್ತಿನ ಮುಂದೆ ಬಹಿರಂಗವಾಗದಿರುತ್ತದೆಯೇ? ಈಗ ಆದದ್ದೂ ಅಷ್ಟೆ ಗಾಲಿ ಕುರ್ಚಿಯಲ್ಲಿ ಕುಳಿತಿರುವ ಮದನಿಯವರನ್ನು ಪವಿತ್ರ ರಂಝಾನ್ ಹಬ್ಬಾಚರಣೆಗೂ ಅವಕಾಶವಿಲ್ಲದಂತೆ ವಂಚನೆಯ ಮೂಲಕ ಬಂಧಿಸಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ವಿಚಾರಣೆಯ ನೆಪದಲ್ಲಿ ಕೂಡಿಹಾಕಲಾಗಿದೆ. ಈ ನವೆಂಬರ್ ೨೨ಕ್ಕೆ ಮದನಿ ಬಂಧನದ ಅವಧಿ ಮುಕ್ತಾಯಗೊಳ್ಳುತ್ತದೆ. ಈ ತನಕ ಮಅದನಿ ಬೆಂಗಳೂರು ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಒಂದೇ ಒಂದು ತುಣುಕು ಸಾಕ್ಷ್ಯಾ ಧಾರವೂ ಲಭ್ಯವಾಗಲಿಲ್ಲ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಇದನ್ನು ಕೆಲ ತಿಂಗಳ ಹಿಂದೆಯೇ ಮಾಧ್ಯಮ ಪ್ರತಿನಿಧಿಗಳ ಮುಂದೆ ಸ್ಪಷ್ಟಪಡಿಸಿದ್ದರು. ಆದರೆ ಅಂದೇ ಪತ್ರಿಕಾಗೋಷ್ಠಿ ನಡೆಸಿದ ಅಂದಿನ ಗೃಹ ಸಚಿವ ಡಾ.ವಿ.ಎಸ್.ಆಚಾಯ್, ಮಅದನಿ ಆರೋಪಿ ಎಂದು ವ್ಯಾಖ್ಯಾನಿಸಿ ಮುಖಭಂಗಕ್ಕೀಡಾಗಿದ್ದರು. ತನಿಖೆ ನಡೆಸುತ್ತಿರುವ ಪೊಲೀ ಸರು ಮಅದನಿ ಬೆಂಗಳೂರು ಸ್ಫೋಟದಲ್ಲಿ ಭಾಗಿಯಾಗಿಲ್ಲ ಎಂದು ಮಾಧ್ಯಮದವರ ಮುಂದೆ ಸ್ಪಷ್ಟಪಡಿಸುವಾಗ, ಸರಕಾರದ ಜವಾ ಬ್ದಾರಿಯುತ ಸ್ಥಾನದಲ್ಲಿರುವವರು ಅದನ್ನು ಅಲ್ಲಗಳೆಯುವುದರ ಹಿಂದೆ ವ್ಯಾಪಕ ಷಡ್ಯಂತ್ರ ಅಡಗಿರುವುದು ರಾಜ್ಯದ ನಿಷ್ಪಕ್ಷಮತಿ, ಬುದ್ದಿವಂತ ಜನತೆಗೆ ಮನದಟ್ಟಾಗುತ್ತದೆ. ಆದರೆ ಮಅದನಿಯನ್ನು ಭಯೋ ತ್ಪಾದಕನೆಂದೂ ಬೆಂಗಳೂರು ಸ್ಫೋಟದ ಸೂತ್ರಧಾರಿಯೆಂದೂ ಬಿಂಬಿ ಸಲು ಹರಸಾಹಸಪಡುತ್ತಿರುವವರ ದೃಷ್ಟಿಯಲ್ಲಿ ಇಂದಿಗೂ ಮಅದನಿ ಅಪರಾಧಿ!

‘ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬ ಗೋಬೆಲ್ಸ್ ಸಿದ್ದಾಂತ ಇಲ್ಲಿ ನಮಗೆ ನೆನಪಾಗುತ್ತದೆ. ಒಂದು ಸುಳ್ಳನ್ನು ಸಾವಿರ ಬಾರಿಯಲ್ಲ ಲೋಕಾಂತ್ಯದ ತನಕ ಹೇಳುತ್ತಲೇ ಇದ್ದರೂ ಸುಳ್ಳು ಸತ್ಯವಾಗುವುದಿದೆಯೇ? ಭಾರತೀಯರು ಇಷ್ಟೊಂದು ಅಧಃಪತನಕ್ಕಿಳಿಯುವರೇ? ನೈಜ ಭಾರತೀಯರಿಗೆ ಖಂಡಿತ ಹೀಗಾಗಲು ಸಾಧ್ಯವಿಲ್ಲ. ಆದ್ದರಿಂದ ಕಣ್ಣು ಮುಚ್ಚಿ ಕತ್ತಲೆ ಮಾಡುವವರ ಬಗ್ಗೆ ಜಯಕಿರಣ ಓದುಗರು ಸದಾ ಜಾಗ್ರತರಾಗಿರಬೇಕಾಗುತ್ತದೆ.

ಅಪರಾಧಕ್ಕೆ ಶಿಕ್ಷೆ ನೀಡುವ ಕಾನೂನು ಭಾರತದಲ್ಲಿದೆ. ಆದರೆ ನಿರಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ಭಾರತದಲ್ಲಿ ನಿರಂತರ ನಡೆದಿದೆ. ನಾಸಿರ್ ಮಅದನಿ ಇಂಥಾ ಘಟನೆಗಳಿಗೆ ಜ್ವಲಂತ ನಿದರ್ಶನ. ಒಬ್ಬ ವ್ಯಕ್ತಿ ತಪ್ಪು ಮಾಡಿ ಶಿಕ್ಷೆ ಅನುಭವಿಸಿದರೆ ಅದು ನ್ಯಾಯಯುತವೇ ಆಗಿರುತ್ತದೆ. ತಪ್ಪು ಮಾಡಿದ ವ್ಯಕ್ತಿಯ ಪರವಾಗಿ ಯಾರಾದರು ಶಬ್ದ ವೆತ್ತುವುದರಲ್ಲೂ ಅರ್ಥ ಇರುವುದಿಲ್ಲ. ಆದರೆ ತಪ್ಪು ಮಾಡದೆ ನಿರಂತರ ಹಿಂಸೆ, ಶಿಕ್ಷೆ ಅನುಭವಿಸುತ್ತಿರುವ ಭಾರತದ ಪ್ರಜೆಯಾದ ಧೀರ ಹೋರಾ ಟಗಾರ ಐ.ಸಿ.ಯಸ್. ಅಬ್ದುಲ್ ನಾಸಿರ್ ಮದನಿ ಬಗ್ಗೆ ನಾವು ಅನುಕಂಪ ತೋರಿಸದಿದ್ದರೆ ನಮ್ಮಲ್ಲಿ ಮಾನವೀಯತೆ ಇದ್ದೂ ಏನು ಪ್ರಯೋಜನ. ಒಬ್ಬ ಸಹೋದರನಿಗೆ ನಿರಂತರವಾಗಿ ಅನ್ಯಾಯವಾಗುತ್ತಿರುವಾಗ ಆ ವ್ಯಕ್ತಿಯ ಪರವಾಗಿ ಧ್ವನಿಯೆತ್ತಬೇಕಾದದ್ದು ಮಾನವರಾದ ನಮ್ಮೆಲ್ಲರ ಪರಮ ಕರ್ತವ್ಯವಾಗಿದೆ. ನ್ಯಾಯದ ಪರವಾಗಿ ಧ್ವನಿಯೆತ್ತುತ್ತಿರುವುದರಲ್ಲಿ ಜಾತಿ ತಾರತಮ್ಯ ಇಲ್ಲ. ಒಂದೇ ತಂದೆ - ತಾಯಿಯ ಮಕ್ಕಳಾದ, ಏಕೋದರ ಸಹೋದರೆ-ಸಹೋದರಿಯರಾದ ನಾವೆಲ್ಲಾ ಇಂಥಾ ಪ್ರಕರಣಗಳು ನಡೆದಾಗ ಒಗ್ಗಟ್ಟಾಗಿ ಸಿಡಿದೇಳಬೇಕು. ಇದು ಮಾನವೀಯತೆಯಾಗಿದೆ. ಮಅದನಿಯವರು ಕಂಚಿನ ಕಂಠದ ತೀಕ್ಷ್ಣ ಶೈಲಿಯ ಭಾಷಣಗಾರನಾ ಗಿರಬಹುದು. ಆದರೆ ಅದು ಭಾರತದ ದುಷ್ಟ ವ್ಯವಸ್ಥೆಯ ವಿರುದ್ಧ ಮಾತ್ರವಾಗಿತ್ತು ಎಂಬ ನಗ್ನ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು.

ಭಾರತ ದೇಶದ ಸಂವಿಧಾನದ ಮೂಲಭೂತ ತತ್ವಗಳಾದ ಭ್ರಾತೃತ್ವ, ಸಹೋದರತೆ, ಸಾಮರಸ್ಯ, ರಾಷ್ಟ್ರ ಪ್ರೇಮವನ್ನು ಧ್ವಂಸಗೊಳಿಸುವವರ ವಿರುದ್ಧ ಮಅದನಿ ಬೆಂಕಿಯುಗುಳುವ ಭಾಷಣ ಮಾಡಿದ್ದಾರೆ. ಆ ಭಾಷಣಗಳು ಎಷ್ಟು ತೀಕ್ಷ್ಣವಾಗಿದ್ದವೆಂಬುದನ್ನು ತಿಳಿಯಬೇಕಾದರೆ ಮಅದನಿಯವರ ಹಿಂದಿನ ಭಾಷಣದ ಸಿಡಿಗಳನ್ನೇ ಕೇಳಬೇಕು. ಹಿಂದೂಗಳ ವಿರುದ್ಧ ಅಥವಾ ಯಾವುದೇ ಒಂದು ಜನಾಂಗದವರ ವಿರುದ್ಧ ಮಅದನಿ ಒಂದೇ ಒಂದು ಶಬ್ದವನ್ನು ಪ್ರಯೋಗಿಸಿಲ್ಲ ಎನ್ನುವುದು ಮಅದನಿಯವರ ಭಾಷಣ ಕೇಳಿದವರಿಗೆ ಹಾಗೂ ಅವರ ಕ್ರಾಂತಿಕಾರಿ ಲೇಖನಗಳನ್ನು ಓದಿದವರಿಗಷ್ಟೇ ತಿಳಿಯಬಹುದು. ದಲಿತರ ದಮನಕ್ಕೀಡಾದವರ, ಹಕ್ಕು ಕಸಿಯಲ್ಪಟ್ಟವರ ಪರವಾಗಿ ಸದಾ ತನ್ನ ಕಂಚಿನ ಕಂಠದಿಂದ ಧ್ವನಿಯೆತ್ತುತ್ತಿದ್ದ ಮಅದನಿಯವರನ್ನು ಇಂದು ದುಷ್ಟ ಆಡಳಿತ ಕೂಟ ಬೆಂಗಳೂರು ಸ್ಫೋಟದ ಸುಳ್ಳು ಆರೋಪ ಹೊರಿಸಿ ಮತ್ತೊಮ್ಮೆ ಬಂಧಿಖಾನೆಗೆ ಸೇರಿಸಿ ತನ್ನ ಕ್ರೌರ್ಯವನ್ನು ಮೆರದಿದೆ. ಹಿಂದೆ ಒಂಬತ್ತೂವರೆ ವರ್ಷಗಳ ಕಾಲ ಮಾಡದ ತಪ್ಪಿಗಾಗಿ ಬಂಧೀಖಾನೆ ಸೇರಿ ನಂತರ ನ್ಯಾಯಾಲಯದಲ್ಲಿ ನಿರಪರಾದಿ ಯೆಂದು ಸಾಬೀತಾಗಿ ಮಅದನಿಯವರು ಹೊರ ಬಂದಂತೆ ಬೆಂಗಳೂರು ಸ್ಫೋಟ ಪ್ರಕರಣದಲ್ಲೂ ಮಅದನಿ ನಿರಪರಾಧಿ ಎನ್ನುವುದು ಸೂರ್ಯ ಪ್ರಕಾಶದಂತೆ ಸ್ಪಷ್ಟ. ಮಅದನಿಯ ನಿರಪರಾಧಿತ್ವ ಸಾಬೀತಾಗಿ ಅವರು ಬಂಧೀಖಾನೆಯಿಂದ ಹೊರ ಬರುವ ದಿನವನ್ನು ನಾವು ಎದುರು ನೋಡೋಣ.

ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ.

No comments:

Post a Comment